-
Notifications
You must be signed in to change notification settings - Fork 51
Getting Started Kannada
ಓಪನ್ ಸ್ಟ್ರೀಟ್ ಮ್ಯಾಪ್ ಮೂಲಕ ಮ್ಯಾಪ್ ಮಾಡುವುದು
ಆರಂಬದಲ್ಲಿ ಮ್ಯಾಪ್ ಕೆಲಸಕ್ಕೆ ಓಂದು ಖಾತೆಯನ್ನು ಹಾಗೂ ತಂತ್ರಾಂಶಗಳನ್ನು ಹಾಕಿಕೊಳ್ಳಬೇಕು,ಆದ್ದರಿಂದ ಈ ಮಾರ್ಗದರ್ಶನಗಳು ಒಪನ್ ಸ್ತ್ರೀಟ್ ಮ್ಯಾಪ್ ಹೊಸ ಖಾತೆಯನ್ನು ತೆಗೆಯಲು ಹಾಗು ಸಂಪಾದಕೀಯ ವನ್ನು ಹಾಕಿಕೊಳ್ಳಲು ಸಹಾಯಕಾರಿ.
- https://www.openstreetmap.org/user/new ಗೆ ಹೋಗಿ, ಖಾತೆಯನ್ನು ತೆರೆಯಿರಿ.
- ನಿಮ್ಮ ಭಾವಚಿತ್ರ ಅತ್ಯವಶಕ.
- ನಿಮ್ಮ ಬಗ್ಗೆ ವಿವರಣೆ ನೀಡಿ.
ನಿಮ್ಮ ವಿವರಣೆ ಹೀಗಿದ್ದರೆ ತುಂಬಾ ಉಪಯೋಗವಾಗಬಹುದು
- ನೀವು ಮ್ಯಾಪ್ ಮಾಡಬೇಕೆಂದಿರುವ ಜಾಗಗಳ ಹೆಸರು ಅಥವ ದೇಶಗಳು.
- ಒಳ್ಳೆಯ ಸಂದೇಶಗಳು.
- ನಿಮ್ಮ ಟ್ವಿಟ್ಟರ್ ಅಥವಾ ಬೇರೆ ಸಾಮಾಜಿಕ ತಾಣಗಳ ಕೊಂಡಿಗಳನ್ನು ಹಾಕಬಹುದು. ಇದರಿಂದ ಬೇರೆಯವರು ನಿಮ್ಮನ್ನು ಸಂಪರ್ಕಿಸಲು ಸಹಾಯಕವಾಗಬಹುದು.
ಇದೊಂದು ಉತ್ತಮವಾದ ಉದಾಹರಣೆ:
ಜಾವ ಓಪನ್ ಸ್ಟ್ರೀಟ್ ಮ್ಯಾಪ್ ಸಂಪಾದಕೀಯ (ಜೆಒಎಸ್ಎಮ್)ವನ್ನು ಮ್ಯಾಪ್ ಸಂಪಾದನೆಗೆ ಬಳಸುತ್ತೇವೆ. ಇಲ್ಲಿ ಅದನ್ನು ಹೇಗೆ ಕಂಪ್ಯೂಟರ್ನಲ್ಲಿ ಹೇಗೆ ಅನುಸ್ಥಾಪಿಸುವುದು ಎಂದು ಕೆಳಗೆ ಹೇಳಲಾಗಿದೆ.
ಜೆಒಎಸ್ಎಮ್ಗೆ ಜಾವ ರನ್ಟೈಮ್ ಎನ್ವಿರಾನ್ಮೆಂಟ್ ಅವಶ್ಯಕ. ಆದ್ದರಿಂದ ಅದನ್ನು ನಿಮ್ಮ ಕಂಪ್ಯೂಟರ್ನಲ್ಲಿ ಅನುಸ್ಥಾಪಿಸಿ.
ಜೆಒಎಸ್ಎಮ್ ತಾಣಕ್ಕೆ ಹೋಗಿ tested
ಆವೃತ್ತಿಯನ್ನು ಡೌನ್ಲೋಡ್ ಮಾಡಿ.
ನಿಮ್ಮ ಕಂಪ್ಯೂಟರ್ನಲ್ಲಿ ಈ ಕೆಳಗಿನ ಹೇಳಿರುವ ಸ್ಥಳದಲ್ಲಿ ಇರಿಸಿ.
- ಓ ಎಸ್ X :
/Applications/
- ವಿಂಡೋಸ್ :
C:\Program files\
ಏರಡು ಬಾರಿ ಡೌನ್ಲೋಡ್ಆದ ಜೆಒಎಸ್ಎಮ್ ಮೇಲೆ ಕ್ಲಿಕ್ಕಿಸಿ.
ನೀವು ನಿಮ್ಮ ಜೆಒಎಸ್ಎಮ್ಗೆ ಜಾಸ್ತಿ ಜಾಗ ಕೋಡುವುದಾದರೆ ಮತ್ತು ನೀವು ಲಿನಕ್ಸ್ಬಳಕೆದಾರರಾದರೆ ಈ ಕೆಳಗಿನ ಕಂಮಾಡನ್ನು ಮಾಡಿರಿ.
~$ java -Xmx1024M -DproxyHost=$PROXY -DproxyPort=8080 -jar josm-tested.jar
ಜೆಒಎಸ್ಎಮ್ ಕ್ಲಿಕ್ಕಿಸಿದಾಗ ಮೊದಲನೆ ಬಾರಿ ಕೆಳಗಿನಂತೆ ಕಾಣುತ್ತದೆ ಹಾಗೂ Preferences ಅನ್ನು ಕ್ಲಿಕ್ ಮಾಡಿ
Preferences ಅನ್ನು ಕ್ಲಿಕ್ ಮಾಡಿ, ಎಕ್ಸ್ಪರ್ಟ್ ಮೋಡ್ ಅಧಿಕರಿಸಿ.
ನಿಮ್ಮ ಬಳಕೆದಾರ ಹೆಸರು ಹಾಗೂ ಗುಪ್ತಪದವನ್ನು ಹಾಕಿ ನಿಮ್ಮ ಓಪನ್ ಸ್ಟ್ರೀಟ್ ಮ್ಯಾಪ್ ಖಾತೆಗೆ ಜೋಡಿಸಿ.
ಈಗ ನೀವು ಓಪನ್ ಸ್ಟ್ರೀಟ್ ಮ್ಯಾಪಿಂದ ಡಾಟವನ್ನು ನಿಮ್ಮ ಕಂಪ್ಯೂಟರ್ ಗೆ ಹಸಿರುಬಣ್ದದ ಕೆಳಗೆ ಮುಖ ಮಾಡಿರುವ ಬಾಣದ ಬಟನ್ ಹೊತ್ತಿ ಪಡೆದುಕೊಳ್ಳಬಹುದು.
ರಿಮೋಟ್ ಕಂಟ್ರೋಲ್ ಅಧಿಕರಿಸುವುದರಿಂದ ನೀವು ನಿಮ್ಮ ಓಪನ್ ಸ್ಟ್ರೀಟ್ ಮ್ಯಾಪಿಂದ ನೇರವಾಗಿ ಜೆಒಎಸ್ಎಮ್ ಸಂಪಾದಕೀಯವನ್ನು ತೆಗೆಯಬಹುದು.
ಹಾಗೇ Download objects to a new layer ಅಧಿಕರಿಸಿ. ಅದರಿಂದ ಓಪನ್ ಸ್ಟ್ರೀಟ್ ಮ್ಯಾಪಿಂದ ನೀವು ಡಾಟವನ್ನು ಪಡೆದುಕೊಳ್ಳಬಹುದು.